Skip to main content area                           Decrease Font Size    Increase Font Size    

ನಮ್ಮಬಗ್ಗೆ

ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮವು ಸಂಪೂರ್ಣ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದೆ. ಈ ಸಂಸ್ಥೆಯನ್ನು ಕಂಪನಿಗಳ ಅಧಿನಿಯಮ 1956ರ ಅಡಿಯಲ್ಲಿ ಸ್ಥಾಪಿಸಲಾಗಿದೆ ಹಾಗೂ ದಿನಾಂಕ : 1-12-2008ರಂದು ನೊಂದಾಯಿಸಲ್ಪಟ್ಟಿದೆ.

ಸಂಸ್ಥೆಯ ಪ್ರಮುಖ ಧ್ಯೇಯೋದ್ದೇಶಗಳು:

  • ರಾಜ್ಯ ಸರ್ಕಾರಕ್ಕೆ ಸೇರಿದ ಅಥವಾ ಶಾಸನಾತ್ಮಕ ಸಂಸ್ಥೆಗಳಿಗೆ ಸೇರಿದ ಸರ್ಕಾರಿ ಜಮೀನನ್ನು ಮಾರಾಟ ಮಾಡುವುದು ಹಾಗೂ ಅಗತ್ಯವಿದ್ದಲ್ಲಿ ಜಮೀನು ಖರೀದಿಸುವುದು ಅಲ್ಲದೆ ಸರ್ಕಾರಿ ಜಮೀನಿಗೆ ಸಂಬಂಧಿಸಿದ ಇತರೆ ವ್ಯವಹರಣೆಗಳನ್ನು ನಿರ್ವಹಿಸುವುದು.
  • ಮೌಲ್ಯಯುಕ್ತವಾದ ಸರ್ಕಾರಿ ಜಮೀನುಗಳನ್ನು ಗುರುತಿಸಿ ಅಭಿವೃದ್ದಿಪಡಿಸುವುದಕ್ಕೆ ಎಲ್ಲಾ ವಿಧವಾದ (ರೀತಿಯ) ಕ್ರಮಗಳನ್ನು ಕೈಗೊಳ್ಳುವುದು.
  • ಬೆಲೆ ಬಾಳುವ ಸರ್ಕಾರಿ ಜಮೀನುಗಳ ಮಾರಾಟಮಾಡುವುದು, ಗುತ್ತಿಗೆ ನೀಡುವುದು, ಖರೀದಿಸುವುದು ಇತ್ಯಾದಿ ವಹಿವಾಟುಗಳಲ್ಲಿ ಮಧ್ಯಸ್ಥಗಾರನ ಪಾತ್ರವಹಿಸುವುದು.
  • 1.ಸಂಸ್ಥೆಯ ಸಂಕ್ಷಿಪ್ತ ಪರಿಚಯ:-

    ಸಂಸ್ಥೆಯ ಸ್ಥಾಪನೆ 01-12-2008
    ಸಂಸ್ಥೆಯ ಸ್ವರೂಪ ಕಂಪನಿ ಅಧಿನಿಯಮ 1956ರ ಅಡಿಯಲ್ಲಿ ಸ್ಥಾಪಿತವಾದ ಸಂಪೂರ್ಣ ಸರ್ಕಾರಿ ಸ್ವಾಮ್ಯದ ಸಂಸ್ಥೆ.
    ಆಡಳಿತ ಇಲಾಖೆ ಕಂದಾಯ ಇಲಾಖೆ, ಕರ್ನಾಟಕ ಸರ್ಕಾರ

    2.ಸಂಸ್ಥೆಯ ಕಾರ್ಯನಿರ್ವಹಣೆಯ ನೀತಿ, ನಿಯಮ, ನಿಬಂಧನೆಗಳು
    ಕಂಪನಿಯ ಒಡಂಬಡಿಕೆಯಲ್ಲಿ ಸೂಚಿಸಿರುವ ಎಲ್ಲಾ ನೀತಿ, ನಿಯಮ, ನಿಬಂಧನೆ ಅನುಸಾರ ಕಾರ್ಯನಿರ್ವಹಿಸುವುದು ಅಲ್ಲದೆ ರಾಜ್ಯ ಸರ್ಕಾರವು ಕಾಲಕಾಲಕ್ಕೆ ನೀಡುವ ನಿರ್ದೇಶನಗಳು ಹಾಗೂ ಮಾರ್ಗ ಸೂಚಿಗಳ ಅನುಸಾರ ಕಾರ್ಯನಿರ್ವಹಿಸುವುದು.

    3. ವಿದ್ಯುನ್ಮಾನ ನಮೂನೆಯಲ್ಲಿ ಲಭ್ಯವಿರುವ ಮಾಹಿತಿ :
    ಸಂಸ್ಥೆಯ ವಿವರಗಳು ಹಾಗೂ ಕಾರ್ಯಚಟುವಟಿಕೆಯ ವಿವರಗಳು.

    4.ಮಾಹಿತಿಯನ್ನು ಪಡೆದುಕೊಳ್ಳಲು ಸಾರ್ವಜನಿಕರಿಗೆ ಇರುವ ಸೌಲಭ್ಯಗಳು
    ಸಾರ್ವಜನಿಕರು ಈ ಸಂಸ್ಥೆಗೆ ಸಂಬಂಧಿಸಿದ ಮಾಹಿತಿಯನ್ನು ಮಾಹಿತಿ ಹಕ್ಕು ಅಡಿಯಲ್ಲಿ ಪಡೆಯಬಹುದು.